Inspiring words
Thursday, 23 November 2017
The Kids of Bishop Parlicarpose public school Flying in Maths World
Today [23/11/17] 100 students of Bishop Parlicarpose public school visiited to Maths world, the creative Laboratory for mathematics. They enjoyed the whole day. ಬಿಷಪ್ ಪರ್ಲಿಕಾರ್ಪೋಸ್ ಪಬ್ಲಿಕ್ ಶಾಲೆಯ 100 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಂದು ಸರಕಾರಿ ಪ್ರೌಢಶಾಲೆ ನಡದ ಗಣಿತ ಪ್ರಯೋಗಶಾಲೆಯ ವೀಕ್ಷಣೆ ಮಾಡಿದರು. ಗಣಿತ ಲೋಕವು ವಿದ್ಯಾರ್ಥಿಗಳಲ್ಲಿ ಹಲವು ಕುತೂಹಲ ವಿಷಯಗಳನ್ನು ಯೋಚಿಸಲು ಪ್ರೇರಣೆ ನೀಡಿತು.
Wednesday, 22 November 2017
Files From Shalini Rajaneesh
November 22, 2017
No comments
Saturday, 18 November 2017
Inspiring comment
P S DESAI, YADRAMI a new comment on your post "9th Notes":
ಯಾಕೂಬ್ ಕೊಯ್ಯೂರು ಉಪಾಧ್ಯಾಯರು ಗಣಿತ ಬೋಧನ ವಸ್ತು ವಿಷಯಗಳನ್ನು ತಯಾರಿಸುವಲ್ಲಿ ಪಟ್ಟ ಶ್ರಮ ಅವರ್ಣನೀಯ. ಇಂತಹವರು ತೀರಾ ವಿರಳ, ಅಪರೂಪ. ನೂರ್ಕಾಲ ಬಾಳಿ ಬದುಕಲಿ. ಅವರ ನಿಶ್ವಾರ್ಥ ಸೇವೆಗೆ ನಾನು ಮತ್ತು ನನ್ನಂತಹ ಅಗಣಿತ ಗಣಿತ ಬೋಧಕರು ಸದಾ ಚಿರಋಣಿಗಳು.
ಪ್ರಭುಗೌಡ ದೇಸಾಯಿ, ಗಣಿತ ಬೋಧಕರು-ಕಲಬುರಗಿ ಜಿಲ್ಲೆ
9902838356
Friday, 17 November 2017
Wednesday, 15 November 2017
ಯೇನಪೋಯ ಶಿಕ್ಷಕ ಪ್ರಶಸ್ತಿ ಪ್ರಧಾನ
ಇಂದು ಯೇನಪೋಯ ಯೂನಿವರ್ಯೇಸಿಟಿ ಕ್ಯಾಂಪಸ್ ನಲ್ಲಿ ಯೇನಪೋಯ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.ಪ್ರಶಸ್ತಿಯನ್ನು ಗೌರವಾನ್ವಿತ ಮಾಜಿ ಲೋಕಾಯುಕ್ತ ಮುಖ್ಯಸ್ಥರೂ,ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರೂ ಆಗಿರುವ ಶ್ರೀ ಸಂ ತೋಷ್ ಹೆಗ್ದೆ ವಿತರಿಸಿದರು. ಸಮಾರಂಭದಲ್ಲಿ ನಾನಾಡಿದ ಮಾತುಗಳು
""ಇಂದಿನ ಸಮಾರಂಭದಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಸಂತೋಷ್ ಹೆಗ್ಡೆಯವರೇ, ವೇದಿಕೆಯಲ್ಲಿರುವ ಯೇನಪೋಯ ಶಿಕ್ಷಣ ಸಂಸ್ಥೆಯ ಕುಟುಂಬ ಸದಸ್ಯರೇ, ವೇದಿಕೆಯ ಮುಂಭಾಗದಲ್ಲಿರುವ ಗಣ್ಯಾತಿ ಗಣ್ಯರೇ, ಹಾಗೂ ನನ್ನ ಪ್ರೀತಿಯ ವಿದ್ಯಾರ್ಥಿಗಳೇ,
ನನ್ನ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಇಂದು ಒಂದು. ಹಳ್ಳಿಯಲ್ಲಿರುವ ಒಂದು ಸರಕಾರಿ ಶಾಲೆಯಲ್ಲಿ ದುಡಿಯುತ್ತಿರುವ ಒಬ್ಬ ಸಾಮಾನ್ಯ ಶಿಕ್ಷಕನಾದ ನನ್ನನ್ನು ಯೇನಪೋಯ ಸಂಸ್ಥೆಯು ಗುರುತಿಸಿ ಗೌರವಿಸಿರುವ ಈ ಕ್ಷಣ ನನ್ನ ಜೀವನದ ಮಹೋನ್ನತ ಕ್ಷಣಗಳಲ್ಲಿ ಒಂದು ಎಂದು ತಿಳಿಸಲು ಸಂತೋಷಪಡುತ್ತಿದ್ದೇನೆ. ಇದಕ್ಕಿಂತಲೂ ಮಿಗಿಲಾಗಿ ಈ ಪ್ರಶಸ್ತಿಯನ್ನು ನಮ್ಮ ಭಾರತ ದೇಶದ ಪ್ರತಿಯೊಬ್ಬರೂ ಗೌರವಿಸುವ, ಸಚ್ಚಾರಿತ್ರ್ಯವುಳ್ಳ, ಪ್ರಾಮಾಣಿಕ ವ್ಯಕ್ತಿತ್ವದ ಶ್ರೀ ಸಂತೋಷ್ ಹೆಗ್ಡೆಯವರ ಕೈಗಳಿಂದ ಪಡೆದಿರುವುದ ನನಗೆ ರೋಮಾಂಚನವನ್ನುಂಟು ಮಾಡಿದೆ. ಈ ಕಾರಣಕ್ಕಾಗಿ ಈ ದಿನ ನನ್ನ ಜೀವನದ ಕೊನೆ ತನಕವು ಸ್ಮರಿಸಲ್ಪಡುತ್ತದೆ ಎಂದು ಈ ವೇದಿಕೆಯಿಂದ ಹೇಳ ಬಯಸುತ್ತೇನೆ.
ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದು ನಂಬಿರುವವ ನಾನು. ಆದರೆ ಈ ವೃತ್ತಿ ಜೀವನದಲ್ಲಿ ಅನೇಕ ನೋವನ್ನೂ ಅನುಭವಿಸಿರುತ್ತೇನೆ. ವೃತ್ತಿಯನ್ನು ತೊರೆಯಬಾರದೇಕೆ? ಎಂಬ ನಿರ್ಧಾರಕ್ಕೂ ಬಂದಿದ್ದೆ. ಆದರೆ ನನ್ನ ಸ್ನೇಹಿತರು ನನಗೆ ನಿಷ್ಠೆಯ ಪಾಠ ಬೋಧಿಸಿದರು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ದೇವರು ಒಂದಲ್ಲ ಒಂದು ದಿನ ಯಶಸ್ಸು ನೀಡುತ್ತಾನೆ ಎಂದು ತಿಳಿಹೇಳಿದರು. ಆ ಮಾತು ಇಂದು ಸತ್ಯವಾಗಿದೆ. ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಒಂದು ವೃತ್ತಿಯಲ್ಲಿ ದುಡಿದರೆ ಅದರ ಪ್ರತಿಫಲ ಏನು ಎಂಬುದಕ್ಕೆ ಈ ವೇದಿಕೆ ಹಾಗೂ ಇಲ್ಲಿ ಸೇರಿರುವ ಸಾವಿರಾರು ಮಂದಿ ಇಂದು ಸಾಕ್ಷಿಗಳಾಗಿದ್ದೀರಿ.
ಇಂದು ಶ್ರೀಯುತ ಸಂತೋಷ್ ಹೆಗ್ಡೆಯವರನ್ನು ರೂಪಿಸಿದ್ದು ನನ್ನಂತಹ ಒಬ್ಬ ಶಿಕ್ಷಕರೇ ಆಗಿರಬಹುದು. ಒಬ್ಬ ಶಿಕ್ಷಕ ಪ್ರಯತ್ನ ಪಟ್ಟರೆ ಇಂತಹ ನೂರಾರು ಸಂತೋಷ್ ಹೆಗ್ಡೆಯವರುಗಳನ್ನು ಸೃಷ್ಟಿಸಬಹುದು.
ಇಂದು ನನ್ನ ಸೇವೆಗೆ ದೇವರು ಪ್ರತಿಫಲ ನೀಡಿದ್ದಾನೆ. ರಾಜ್ಯದ ಉದ್ದಗಲಕ್ಕೂ ಬೀದರ್ ನ ಔರಾದ್ ನಿಂದ ದಕ್ಷಿಣದ ಚಾಮರಾಜನಗರ ಸಹಿತ ಅನೇಕ ಜಿಲ್ಲೆಗಳ ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳು ನನ್ನು ಬರಮಾಡಿಕೊಂಡು ಗೌರವಿಸಿದರು. ನನ್ನಲ್ಲಿರುವ ಅಲ್ಪ ಜ್ಞಾನವನ್ನು ಅವರೊಂದಿಗೆ ಹಂಚಿಕೊಂಡಾಗ ಸಂತೋಷಪಟ್ಟರು. ಇದಕ್ಕಿಂತ ಮಿಗಿಲಾದದ್ದು ಒಬ್ಬ ಶಿಕ್ಷಕನಿಗೆ ಇನ್ನೇನು ಬೇಕು.
ಇಂದು ಸಮಾಜ ಶಿಕ್ಷಕರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ. ಒಂದು ಹೆಣ್ಣು ಮಗುವನ್ನು ಯಾವುದೇ ಆತಂಕ, ಭಯವಿಲ್ಲದೆ ಒಬ್ಬ ಶಿಕ್ಷಕನೊಂದಿಗೆ ಕಳುಹಿಸಲು ಹೆತ್ತವರು ಧ್ಯರ್ಯ ತೋರುತ್ತಾರೆ ಎಂದರೆ ಸಮಾಜ ಶಿಕ್ಷಕರ ಮೇಲಿಟ್ಟಿರುವ ಅಪಾರ ನಂಬಿಕೆಯೇ ಕಾರಣ. ಸಮಾಜ ಈ ನಂಬಿಕೆಯನ್ನು ಬೇರೆ ಯಾವುದೇ ವೃತ್ತಿಯಲ್ಲಿರುವವರಲ್ಲಿ ಇಟ್ಟಿಲ್ಲ. ಆ ನಂಬಿಕೆಯನ್ನು ವೃತ್ತಿಜೀವನದ ಪೂರ್ತಿ ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಈಡೇರಿಸುವ ಭರವಸೆ ನೀಡುತ್ತಾ ಮತ್ತೊಮ್ಮೆ ನನ್ನನ್ನು ಗೌರವಿಸಿದ ಯೇನಪೋಯ ಶಿಕ್ಷಣ ಸಂಸ್ಥೆಯ ಸಂಬಂಧಿಸಿದ ಎಲ್ಲರಿಗೂ ನನ್ನ ಹೃದಯಾಂತರಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಾ ನನ್ನ ಮಾತುಗಳನ್ನು ಕೊನೆಗೊಳಿಸುತ್ತಿದ್ದೇನೆ. ವಂದನೆಗಳು""

Friday, 10 November 2017
HERON"S FORMULA - IX Mathematics Chapte 12
Wednesday, 8 November 2017
Sarvodaya Highschool Periyadka Uppinangady, Puttur,D.K. in Maths Lab
Today [08/11/2017] Students and Staff of Sarvodaya Highschool Periyadka,Uppinangady,Puttur Taluk visited to Maths World-The creative Laboratory for Mathematics. They enjoyed their day in Lab. We are very happy to see the students and teachers from Various part of the State are visiting to our School.
ಇಂದು ಸರ್ವೋದಯ ಹೈಸ್ಕೂಲ್ ಪೆರಿಯಡ್ಕ,ಉಪ್ಪಿನಂಗಡಿ,ಪುತ್ತೂರು ತಾಲೂಕು ಇಲ್ಲಿನ 40 ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳು ಗಣಿತ ಲೋಕಕ್ಕೆ ಭೇಟಿನೀಡಿದರು.

Tuesday, 7 November 2017
Class Notes for 9th standard Maths Chapter - 10
ಒಂಭತ್ತನೇಯ ತರಗತಿಯ ಗಣಿತ ಅಧ್ಯಾಯ 10 ವೃತ್ತಗಳು ಪಾಠದ ಕನ್ನಡ ನೋಟ್ಸ್ ಅಪ್ ಲೋಡ್ ಮಾಡಲಾಗಿದೆ.
Go to Menu bar - Click Notes - Click 9th Notes
Thursday, 2 November 2017
Ariticle by Veeresh Arasikere in Social Media
ಗಣಿತ ಲೋಕದ ಮಾಂತ್ರಿಕ:ಯಾಕೂಬ್ ಮೇಷ್ಟ್ರು
ಯಾಕೂಬ್ ಕೊಯ್ಯೂರು Yakub Koyyur, ,ಇದು ಕರ್ನಾಟಕ ರಾಜ್ಯದಾದ್ಯಂತ ಶಿಕ್ಷಕರಲ್ಲಿ ಚಿರಪರಿಚಿತ ಹೆಸರು.ಗಣಿತ ಬೋಧನಾ ಲೋಕದಲ್ಲಿ ಮಿಂಚಿನ ಸಂಚಾಲನ ಮೂಡಿಸಿದ ಶಿಕ್ಷಕರಿವರು.ಶಿಕ್ಷಕ ವೃತ್ತಿ ಎನ್ನುವುದು ಕೇವಲ ಕರಿಹಲಗೆಯ ಬರಹಗಳಿಗೆ ಮಾತ್ರ ಸೀಮಿತವಲ್ಲ ಎಂಬ ಕಲ್ಪನೆಯನ್ನು ಸಾಕಾರಗೊಳಿಸಿದ ಇವರು ರಾಜ್ಯದ ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದ್ದರೆ.ಆಧುನಿಕತೆಗೆ ನಾವಿನ್ಯದ ಸ್ಪರ್ಶ
BEd Students of CTE Mangalore Visited to Maths Lab
ಇಂದು [30/10/2017] ಮಂಗಳೂರು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ 38 ಶಿಕ್ಷಣಾರ್ಥಿಗಳು ಶ್ರೀ ಕುಮಾರಸ್ವಾಮಿ, ಹಿರಿಯ ಉಪನ್ಯಾಸಕರು ಹಾಗೂ ಶ್ರೀ ವೆಂಕಟೇಶ್ ಪೈ, ಗಣಿತ ಅಧ್ಯಾಪಕರು ಇವರುಗಳ ನೇತೃತ್ವದಲ್ಲಿ ಸರಕಾರಿ ಪ್ರೌಢಶಾಲೆ ನಡ ಇಲ್ಲಿನ ಗಣಿತ ಲೋಕಕ್ಕೆ ಶೈಕ್ಷಣಿಕ ಭೇಟಿಯನ್ನು ನೀಡಿದ್ದರು.
Today[30/10/2017] 38 Students teachers of CTE Mangalore visited to our Maths Lab lead by Mr Kumaraswamy, the senior lecterur, and Mr Venkatesh Pai.

Subscribe to:
Posts (Atom)