New

ಎಸ್.ಎಸ್.ಎಲ್.ಸಿ. ಗಣಿತ ವಿಷಯ ಎಸ್.ಎಸ್.ಎಲ್.ಸಿ 2021 ಮಾದರಿ ಪ್ರಶ್ನೆ ಪತ್ರಿಕೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಬಿಡುಗಡೆಯಾಗಿದ್ದು ಇಲ್ಲಿ ಲಭ್ಯವಿದೆ...ಖ್ಯಾತ ಮನಶಾಸ್ತ್ರಜ್ಞರಾದ ಥಾನ೯ಡೈಕ್ ರವರ ಅದ್ಭುತ ಸಾಲುಗಳು ನೀವು ಓಡುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಡೆಯುತ್ತಾರೆ.ನೀವು ನಡೆಯುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಿಲ್ಲುತ್ತಾರೆ.ನೀವು ನಿಂತಿದ್ದರೆ,ನಿಮ್ಮ ಮಕ್ಕಳು ಮಲಗುತ್ತಾರೆ.ನೀವು ಮಲಗಿದ್ದರೆ,ನಿಮ್ಮ ಮಕ್ಕಳು ನಿದ್ರಿಸುತ್ತಾರೆ.ನೀವು ನಿಮ್ಮ ತರಗತಿಯಲ್ಲಿ ನಿದ್ರಿಸುತ್ತಿದ್ದರೆ,ನಿಮ್ಮ ಮಕ್ಕಳು ಸಾಯುತ್ತಾರೆ.ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ಮಕ್ಕಳಲ್ಲಿ ಚೈತನ್ಯದ ಚಿಲುಮೆಯ ಮೂಲವಾಗೋಣ..." ಮಕ್ಕಳು- ನಮ್ಮ ಕನಸುಗಳು "

Thursday 2 November 2017

Maths World The Creative Laboratory for Mathematics



ಸರಕಾರಿ ಪ್ರೌಢಶಾಲೆ ನಡ ಇಲ್ಲಿ ಈ 'ಗಣಿತ ಲೋಕ' ಎಂಬ ಗಣಿತ ಪ್ರಯೋಗಶಾಲೆಯನ್ನು ರಚನೆ ಮಾಡಲಾಯಿತು. ದಿನಾಂಕ 09/02/2015ರಂದು ಶಾಲೆಯ ಬೆಳ್ಳಿಹಬ್ಬದ ಸಂಭ್ರಮದಂದು ಈ ಗಣಿತ ಲೋಕವನ್ನು ಉದ್ಘಾಟನೆ ಮಾಡಲಾಯಿತು.      ನಡ 
ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಹೃದಯ ವಿಶಾಲತೆಯೇ ಈ ಪ್ರಯೋಗಶಾಲೆ ನಿರ್ಮಾಣಕ್ಕೆ ಕಾರಣ. ಇದರ
ಮುಂಚೂಣಿಯಲ್ಲಿ ನಾಯಕತ್ವವನ್ನು ವಹಿಸಿ, ಪ್ರಯೋಗಶಾಲೆಯನ್ನು ಪೂರ್ತಿಗೊಳಿಸಲು ನನಗೆ ಸಹಕಾರ ನೀಡಿದವರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಶ್ರೀ ಹರೀಶ್ ಕಾರಿಂಜ ರವರು. ಉಳಿದಂತೆ ಮಾನ್ಯ ಶಾಸಕರಾದ ವಸಂತ ಬಂಗೇರ, ತಾಲೂಕು ಪಂಚಾಯತ್ ಸದ್ಯರಾದ ಶ್ರೀ ಗಣೇಶ್ ಕಣಾಲ್, ರೋಟರಿ ಕ್ಲಬ್ ಮತ್ತು ಬಾರ್ ಅಸೋಶಿಯೇಶನ್ ಬೆಳ್ತಂಗಡಿ, ಮೆಂಡ ಫೌಂಡೇಶನ್, ವೃತ್ತಿಯಲ್ಲಿ ಉಚ್ಚ ನ್ಯಾಯಾಲಯದ ವಕೀಲರಾಗಿರುವ ಶ್ರೀ ಕರುಣಾಕರ್ ಪಾಂಬೇಲ್, ನಿರ್ದೇಶಕರು ಹಟ್ಟಿ ಚಿನ್ನದ ನಿಗಮ, ಹಾಗೂ ಇನ್ನಿತರ ಅನೇಕ ಮಂದಿ ಮಹಾನೀಯರು ಈ ಪ್ರಯೋಗಶಾಲೆಯ ರಚನೆಗೆ ಕಾರಣರಾಗಿರುತ್ತಾರೆ.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶರ್ಮಿಳಾ ಬಿ, ಸಮಾಜ ಶಿಕ್ಷಕರಾದ ಶ್ರೀ ಶಿವಪುತ್ರ ಸುಣಗಾರ ಹಾಗೂ ಎಲ್ಲಾ ಶಿಕ್ಷಕ ವೃಂದದವರ ಸಹಾಯ ಸಹಕಾರವೇ ಈ ಪ್ರಯೋಗಶಾಲೆಯ ನಿರ್ಮಾಣಕ್ಕೆ ಕಾರಣ.

2 comments:

  1. Thanks for sharing great thoughts. Are you a student or failed in 9th or 11th class want to complete Intermediate so take Patrachar Admission to clarify 10th or 12th class exam Cbse Patrachar is best Option for those students who want to continue their education.

    ReplyDelete