New

ಎಸ್.ಎಸ್.ಎಲ್.ಸಿ. ಗಣಿತ ವಿಷಯ ಎಸ್.ಎಸ್.ಎಲ್.ಸಿ 2021 ಮಾದರಿ ಪ್ರಶ್ನೆ ಪತ್ರಿಕೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಬಿಡುಗಡೆಯಾಗಿದ್ದು ಇಲ್ಲಿ ಲಭ್ಯವಿದೆ...ಖ್ಯಾತ ಮನಶಾಸ್ತ್ರಜ್ಞರಾದ ಥಾನ೯ಡೈಕ್ ರವರ ಅದ್ಭುತ ಸಾಲುಗಳು ನೀವು ಓಡುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಡೆಯುತ್ತಾರೆ.ನೀವು ನಡೆಯುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಿಲ್ಲುತ್ತಾರೆ.ನೀವು ನಿಂತಿದ್ದರೆ,ನಿಮ್ಮ ಮಕ್ಕಳು ಮಲಗುತ್ತಾರೆ.ನೀವು ಮಲಗಿದ್ದರೆ,ನಿಮ್ಮ ಮಕ್ಕಳು ನಿದ್ರಿಸುತ್ತಾರೆ.ನೀವು ನಿಮ್ಮ ತರಗತಿಯಲ್ಲಿ ನಿದ್ರಿಸುತ್ತಿದ್ದರೆ,ನಿಮ್ಮ ಮಕ್ಕಳು ಸಾಯುತ್ತಾರೆ.ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ಮಕ್ಕಳಲ್ಲಿ ಚೈತನ್ಯದ ಚಿಲುಮೆಯ ಮೂಲವಾಗೋಣ..." ಮಕ್ಕಳು- ನಮ್ಮ ಕನಸುಗಳು "

Thursday 2 November 2017

Ariticle by Veeresh Arasikere in Social Media

ದಿನಕ್ಕೊಂದು ಕಥೆ

ಗಣಿತ ಲೋಕದ ಮಾಂತ್ರಿಕ:ಯಾಕೂಬ್ ಮೇಷ್ಟ್ರು
ಯಾಕೂಬ್ ಕೊಯ್ಯೂರು Yakub Koyyur, ,ಇದು ಕರ್ನಾಟಕ ರಾಜ್ಯದಾದ್ಯಂತ ಶಿಕ್ಷಕರಲ್ಲಿ ಚಿರಪರಿಚಿತ ಹೆಸರು.ಗಣಿತ ಬೋಧನಾ ಲೋಕದಲ್ಲಿ ಮಿಂಚಿನ ಸಂಚಾಲನ ಮೂಡಿಸಿದ ಶಿಕ್ಷಕರಿವರು.ಶಿಕ್ಷಕ ವೃತ್ತಿ ಎನ್ನುವುದು ಕೇವಲ ಕರಿಹಲಗೆಯ ಬರಹಗಳಿಗೆ ಮಾತ್ರ ಸೀಮಿತವಲ್ಲ ಎಂಬ ಕಲ್ಪನೆಯನ್ನು ಸಾಕಾರಗೊಳಿಸಿದ ಇವರು ರಾಜ್ಯದ ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದ್ದರೆ.ಆಧುನಿಕತೆಗೆ ನಾವಿನ್ಯದ ಸ್ಪರ್ಶ

ನೀಡಿ.ಹಳೆಯದನ್ನು ಹೊಸತನಕ್ಕೆ ಮಾರ್ಪಡಿಸಿ,ಪರಾಮರ್ಶಗೆ ತಾರ್ಕಿಕತೆಯನ್ನು ಒಡ್ಢಿ,ವಿಮರ್ಶೆಗೆ ಆಧಾರಗಳನ್ನು ರೂಡಿಸಿ ಗಣಿತ ಲೋಕದಲ್ಲಿ ಪ್ರಾಯೋಗಿಕ ಪ್ರವೃತ್ತಿಗೆ ಮುಂದಾಗಿ ಸಹಸ್ರ ಸಹಸ್ರ ಸಂಖ್ಯೆಯ ಕೂತುಹಲಕಾರಿ ಮನಸ್ಸುಗಳಿಗೆ ನಿರ್ಧಿಷ್ಚ ,ಸುಸ್ಪಷ್ಟ ಉತ್ತರ ದೊರಕಿಸುವಲ್ಲಿ ಅವಿರತ ಪ್ರಯತ್ನದ ದ್ಯೋತಕ ನಮ್ಮ ಮೇಷ್ಟ್ರು. ಇವತ್ತು ಎಲ್ಲಾವು ವ್ಯಾವಹಾರಿಕವಾಗಿರುವಾಗ ,ಅದನ್ನು ಮೀರಿ ತಾನು ಮಾಡಿದ ಪ್ರತಿಯೊಂದು ಕೆಲಸಗಳು ಶಿಕ್ಷಕ ಸಮುದಾಯಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಸುಲಭದಲ್ಲಿ ದೊರಕುವಂತೆ ಮಾಡಿರುವ ಅವರ ಪ್ರಯತ್ನ ಶ್ಲಾಘನೀಯ.ಸಾಮಾಜಿಕ ಜಾಲತಾಣಗಳನ್ನು ಸಮಾಜಕ್ಕೆ ಪೂರಕವಾಗಿ ಬಳಸಬಹುದೆಂಬುದನ್ನು ಸಾಧಿಸಿ ತೋರಿಸುತ್ತಿರುವ ಅಪೂರ್ವ ಶಿಕ್ಷಕ.ವರ್ತಮಾನದಲ್ಲಿ ಅವಾಂತರವನ್ನೆ ಸೃಷ್ಟಿಸಿ , ಮನುಷ್ಯ ಮನಸ್ಸುಗಳನ್ನು ಬೆಸುಗೆ ಹಾಕಲಾಗದಷ್ಟು ಛಿದ್ರಗೊಳಿಸುತ್ತಿರುವ ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮವನ್ನು ರಚನಾತ್ಮಕವಾಗಿ ಬಳಸಿಕೊಂಡು,ತಾನು ಅರಿತ ಜ್ಞಾನವನ್ನು ತನ್ನ ಸುತ್ತಲಿನ ತಲುಪಲಾಗದ ಪ್ರದೇಶಗಳಿಗೆ ಪಸರಿಸುತ್ತಿರುವ ಇವರು ಅಸಾಮಾನ್ಯ ಶಿಕ್ಷಕ. ವಿಷಯ ವೇದಿಕೆಗೆ ಜೀವ ತುಂಬಿ.ಬರಡಾಗಿದ್ದ ಗಣಿತ ವೇದಿಕೆಯನ್ನು ತಾನು ರಚಿಸಿದ ಸಾವಿರಾರು ಪುಟಗಳ ಕೃತಿಗಳಿಂದ ಹಚ್ಚ ಹಸಿರು ಮಾಡಿ,ರಾಜ್ಯದ ತುಂಬೆಲ್ಲಾ ವಿದ್ಯಾರ್ಥಿಗಳ ಪರೋಕ್ಷ ಗುರುವಾಗಿರುವ ಶ್ರೀ ಯುತರು ಶಿಕ್ಷಕರಿಗೆ ಅನುಕರಣೀಯರಾಗಿದ್ದರೆ.ದಣಿವಿಲ್ಲದ ಶ್ರಮದ ಮುಂದುವರಿದ ಭಾಗವಾಗಿ ಪಠ್ಯಕ್ಕೆ ಸಂಬಂಧಿಸಿದ ವಿಡಿಯೋ ಗಳನ್ನು ತಯಾರಿಸಿ,ಯೂ ಟ್ಯೂಬ್ ಮೂಲಕ ಎಲ್ಲಾ ವಿಧ್ಯಾರ್ಥಿ ಹಾಗೂ ಶಿಕ್ಷಕರು ಸುಲಭವಾಗಿ ಪಡೆಯುವಂತೆ ಮಾಡಿದ ಅವರ ಪ್ರಯತ್ನಕ್ಕೆ ಬೆಲೆಕಟ್ಟಲಾಗದು. ಕೊಯ್ಯೂರು ಎಂಬ ಕುಗ್ರಾಮದಲ್ಲಿ ಇಸುಬು ಬ್ಯಾರಿ ಮತ್ತು ಅಲಿಯಮ್ಮ ಎಂಬ ಸಾತ್ವಿಕ ದಂಪತಿಗಳ ಮಗನಾಗಿ ಹುಟ್ಟಿ.ಎಸ್.ಡಿ.ಎಂ ಸಂಸ್ಥೆಯಲ್ಲಿ ತಮ್ಮ ಪದವಿ ಮುಗಿಸಿದ ಇವರು ,ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರಿನಿಂದ ,ಮಂಗಳೂರು ವಿಶ್ವ ವಿದ್ಯಾಲಯಕ್ಕೆ ದ್ವಿತೀಯ ರಾಂಕ್ ಪಡೆದು ,ತೀರಾ ಹಳ್ಳಿ ಪ್ರದೇಶವಾದ ಸರಕಾರಿ ಶಾಲೆ ನಡದಲ್ಲಿ ತನ್ನ ಸರಕಾರಿ ವೃತ್ತಿ ಜೀವನವನ್ನು ಆರಂಭಿಸಿದರು. ಸರಕಾರಿ ಶಾಲೆಯಲ್ಲಿ ತಮ್ಮ ವೃತ್ತಿ ಜೀವನದ ಆರಂಭದಲ್ಲೇ ಸಂಚಲನ ಉಂಟು ಮಾಡಿದ ಇವರು ಶಾಲೆಗೆ ಶೇಕಡಾ 100 ಸಹಿತ ನಿರಂತರ ಉತ್ತಮ ಫಲಿತಾಂಶ ದೊರಕಿಸಿ ಕೊಟ್ಟು , ಸರಕಾರಿ ಪ್ರೌಢ ಶಾಲೆ ನಡವನ್ನು ರಾಜ್ಯದ ಉತ್ತಮ ಶಾಲೆಗಳ ಸಾಲಿನಲ್ಲಿ ನಿಲ್ಲಿಸಿದವರು. ಇವರ ಪ್ರತಿಭೆ ಇಡೀ ರಾಜ್ಯಕ್ಕೆ ಅನಾವರಣಗೊಂಡದ್ದು 2015 ರಲ್ಲಿ ,ಆ ವರ್ಷ ನಡವೆಂಬ ಕುಗ್ರಾಮ ರಾಜ್ಯದ ಮೂಲೆ ಮೂಲೆಗಳಿಗೂ ಪರಿಚಯವಾಯಿತು.ಆ ಮೂಲಕ ಶ್ರೀ ಯುತರು ಇಡೀ ರಾಜ್ಯದ ಶಿಕ್ಷಕರುಗಳಿಗೆ ಮಾದರಿಯಾದರು.ಇದಕ್ಕೆ ಕಾರಣವಾದದ್ದು ಯಾಕೂಬ್ ರವರು ನಿರ್ಮಿಸಿದ "ಗಣಿತ ಲೋಕ" ಎಂಬ ಗಣಿತದ ಪ್ರಯೋಗ ಶಾಲೆ.ಈ ಪ್ರಯೋಗ ಶಾಲೆಯು ಅವರ ಕನಸಿನ ಸಾಕಾರ ರೂಪ .ಹಳ್ಳಿಯಲ್ಲಿರುವ ಒಂದು ಸರಕಾರಿ ಶಾಲೆ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಶಾಲೆಯಾಗಿದೆ.ಸರಕಾರದ ಕಿಂಚಿತ್ತೂ ಅನುದಾನವಿಲ್ಲದೆ,ಕೇವಲ ತನ್ನ ಹಳೇ ವಿದ್ಯಾರ್ಥಿಗಳ ಸಹಾಯ ಪಡೆದು ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಪ್ರಯೋಗ ಶಾಲೆ ರಾಜ್ಯದ ಸಾವಿರಾರು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪ್ರವಾಸಿ ತಾಣವಾಗಿದೆ. ಕಲಿಕಾ ನ್ಯೂನತೆ ಹೊಂದಿರುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಯಲ್ಲಿ ನಿರ್ಣಾಯಕ ಹಂತದಲ್ಲಿ ಕನಿಷ್ಟ ಅಂಕಗಳನ್ನಾದರೂ ಗಳಿಸಿ ಉತ್ತೀರ್ಣಗೊಂಡು ತನ್ನ ಬದುಕನ್ನು ರೂಪಿಸಿಕೊಳ್ಳಲಿ ಎಂಬ ವಿಶಾಲ ಮನೋಭಾವನೆಯಿಂದ ಟಾರ್ಗೆಟ್ -40 ಎಂಬ ಕಲ್ಪನೆಯೊಂದಿಗೆ ಅನೇಕ ರಚನೆಗಳನ್ನು ಸ್ವತ: ತಯಾರಿಸಿ,ತನ್ನ ಶಾಲೆಗೆ ಮಾತ್ರ ಸೀಮಿತಗೊಳಿಸದೆ,ರಾಜ್ಯದ ತುತ್ತ ತುದಿಯಿಂದ ಕಟ್ಟ ಕಡೆಯವರೆಗಿನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿರುವ ಇವರು ಇಡೀ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಮಮತೆಯ ಶಿಕ್ಷಕರೆಂದರೆ ತಪ್ಪಾಗದು.ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕರೆಮಾಡಿ ಸಲಹೆ, ಸೂಚನೆಗಳನ್ನು ಪಡೆಯುತ್ತಿದ್ದರೆ ಎಂದಾಗ ಶ್ರೀ ಯುತರು ಅವರಿಗೆಷ್ಟು ಪರಿಚಿತರು ಎಂಬುವುದು ಮನದಟ್ಟಾಗುತ್ತದೆ.ರಾಜ್ಯ ಗಣಿತ-ವಿಜ್ಞಾನ ಶಿಕ್ಷಕರ ವೇದಿಕೆಯ ಒಬ್ಬ ಸಕ್ರೀಯ ಸದಸ್ಯರಾಗಿರುವ ಇವರು ವೇದಿಕೆಯ ಪ್ರತಿಯೊಬ್ಬ ಶಿಕ್ಷಕನ ಪ್ರೀತಿ ಮತ್ತು ಗೌರವಗಳಿಗೆ ಪಾತ್ರವಾಗಿದ್ದಾರೆ.ಈ ವೇದಿಕೆಯ ಮೂಲಕ ಸುಮಾರು 4000 ಪುಟಗಳಷ್ಟು ನೋಟ್ಸ್ ಗಳನ್ನು ಹಂಚಿಕೊಂಡಿರುತ್ತಾರೆ.ತಾನು ತಯಾರಿಸಿದ ಪ್ರತಿಯೊಂದು ರಚನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಶ್ರೀ ಯುತರು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದು, ಕರ್ನಾಟಕದ ರಾಜ್ಯದ ಬಹುತೇಕ ನಗರ,ಹಳ್ಳಿಗಳಿಗೆ ಭೇಟಿ ನೀಡಿ ಅವರ ಗಣಿತ ಸಮಸ್ಯೆಗಳನ್ನ ಪರಿಹಾರಿಸಿದ್ದರೆ. ಇವರ ಸಾಧನೆಯನ್ನ ಮೆಚ್ಚಿ ಆನೇಕ ಸಂಘ ಸಂಸ್ಥೆಗಳು ಇವರನ್ನ ಗೌರವಿಸಿವೆ. ಲಯನ್ಸ್ ಕ್ಲಬ್ ಬೆಳ್ತಂಗಡಿ ಸಂಸ್ಥೆಯಿಂದ "ಗಣಿತ ಬ್ರಹ್ಮ".ಜೇಸಿ ಬೆಳ್ತಂಗಡಿ "ಸಾಧನಾ ಶ್ರೀ".ಬೈರ ಸಮಾಜ ಬೆಳ್ತಂಗಡಿ "ಭೈರಶ್ರೀ" ಶ್ರೀನಿವಾಸ್ ಗ್ರೂಪ್ ಆಪ್ ಕಾಲೇಜ್ ಮೆನೆಜ್ ಮೆಂಟ್ ಇವರಿಗೆ "ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಉತ್ತಮ ಶಿಕ್ಷಕ ಪ್ರಶಸ್ತಿ".ಎ.ಶ್ಯಾಮರಾವ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ. ಸಾರ್ವಜನಿಕ ಶಿಕ್ಷಣ ಇಲಾಖೆ 2016 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸಿವೆ. ಇವರ ಸಾಧನೆಯನ್ನ ಟಿ.ವಿ.9.ವಿಜಯ ವಾಣಿ.ವಾರ್ತಾ ಭಾರತಿ.ಪ್ರಜಾ ವಾಣಿ. ಪತ್ರಿಕೆಗಳು ಅಲ್ಲದೆ ಸಲಾರ್ ,ಇಂಕಿಲಾಬ್ ಮೊದಲಾದ ಉರ್ದು ಪತ್ರಿಕೆ ಗಳು .ರಾಷ್ಟ್ರದ ಪ್ರಮುಖ ಪತ್ರಿಕೆ ದಿ ಹಿಂದೂ ಪತ್ರಿಕೆಯಲ್ಲಿ ಇವರ ಬಗ್ಗೆ ಅಂಕಣ ಗಳನ್ನ ಬರೆದಿದ್ದರೆ. ಇವರು ಪ್ರಸ್ತುತ M.H.R.D ಯ ರಾಷ್ಟ್ರೀಯ ಅವಿಷ್ಕಾರ ಅಭಿಯಾನದ ಸದಸ್ಯರಾಗಿರುವುದು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ.ಇವರ ಬ್ಲಾಗ್

ykmathsworld.blogspot.com ಯೂ ಟ್ಯೂಬ್ ನಲ್ಲಿ ವಿಡಿಯೋ ಗಳನ್ನ ನೋಡಲು yakub koyyur ಟೈಪ್ ಮಾಡಿ.ಇವರ ಇ-ಮೇಲ್ ಐಡಿ yhokkila@gmail.com ಇವರನ್ನ ಅಭಿನಂದಿಸಲು 9008983286 ಜಂಗಮ ವಾಣಿ ಗೆ ಕರೆ ಮಾಡಬಹುದು.ಮತ್ತು ನಿಮ್ಮ ತರಗತಿಯಲ್ಲಿ ಬರುವ ಗಣಿತ ಸಮಸ್ಯೆಗಳನ್ನ ಪರಿಹಾರಿಸಿಕೊಳ್ಳಬಹುದು.ನಮ್ಮ ರಾಜ್ಯದಲ್ಲಿ ಇನಷ್ಟ ಗಣಿತ ಲ್ಯಾಬ್ ಗಳು ಸೃಷ್ಟಿಯಾಗಲು ಕಾರಣಿಕರ್ತರಾಗಿರುತ್ತಾರೆ.ಇಂತಹ ಮೇರು ವ್ಯಕ್ತಿತ್ವಕ್ಕೆ ನಮ್ಮದೊಂದು ಬಿಗ್ ಸಲಾಂ.*
ಕೃಪೆ: Naveed Ahmed Parveez *ನವೀದ್ ಆಹಮದ್ ಪರವೇಜ್*.ಶಿಕ್ಷಕರು.ಶಿವಮೊಗ್ಗ.
ಸಂಗ್ರಹ : Veeresh Arasikere *ವೀರೇಶ್ ಅರಸಿಕೆರೆ.*ದಾವಣಗೆರೆ.

2 comments: