New

ಎಸ್.ಎಸ್.ಎಲ್.ಸಿ. ಗಣಿತ ವಿಷಯ ಎಸ್.ಎಸ್.ಎಲ್.ಸಿ 2021 ಮಾದರಿ ಪ್ರಶ್ನೆ ಪತ್ರಿಕೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಬಿಡುಗಡೆಯಾಗಿದ್ದು ಇಲ್ಲಿ ಲಭ್ಯವಿದೆ...ಖ್ಯಾತ ಮನಶಾಸ್ತ್ರಜ್ಞರಾದ ಥಾನ೯ಡೈಕ್ ರವರ ಅದ್ಭುತ ಸಾಲುಗಳು ನೀವು ಓಡುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಡೆಯುತ್ತಾರೆ.ನೀವು ನಡೆಯುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಿಲ್ಲುತ್ತಾರೆ.ನೀವು ನಿಂತಿದ್ದರೆ,ನಿಮ್ಮ ಮಕ್ಕಳು ಮಲಗುತ್ತಾರೆ.ನೀವು ಮಲಗಿದ್ದರೆ,ನಿಮ್ಮ ಮಕ್ಕಳು ನಿದ್ರಿಸುತ್ತಾರೆ.ನೀವು ನಿಮ್ಮ ತರಗತಿಯಲ್ಲಿ ನಿದ್ರಿಸುತ್ತಿದ್ದರೆ,ನಿಮ್ಮ ಮಕ್ಕಳು ಸಾಯುತ್ತಾರೆ.ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ಮಕ್ಕಳಲ್ಲಿ ಚೈತನ್ಯದ ಚಿಲುಮೆಯ ಮೂಲವಾಗೋಣ..." ಮಕ್ಕಳು- ನಮ್ಮ ಕನಸುಗಳು "

Tuesday 9 January 2018

Innovative action to improve SSLC Result 2018

ಒಂದು ಹೊಸ ಪ್ರಯೋಗ. ಸದಾಶಿವ ಪೂಜಾರಿ, ಅನುದಾನಿತ ಪ್ರೌಢಶಾಲೆ ಉಜಿರೆ, ಶರತ್ ಕುಮಾರ್, ಸ.ಪ.ಪೂ.ಕಾಲೇಜು ವೇಣೂರು, ವೀಣಾ ಮೇಡಂ, ಸ.ಪ್ರೌ.ಶಾಲೆ ಹಳೇಪೇಟೆ ಉಜಿರೆ ಹಾಗೂ ಯಾಕೂಬ್ ಕೊಯ್ಯೂರು ಇವರುಗಳ ತಂಡದಿಂದ ಒಂದು ವಿನೂತನ ಪ್ರಯೋಗ. ಉದ್ದೇಶ ಎಸ್.ಎಸ್.ಎಲ್.ಸಿ.ಫಲಿತಾಂಶ ಉತ್ತಮ ಪಡಿಸುವುದು. ಅದಕ್ಕಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳೇ ಟಾರ್ಗೆಟ್. ಈ ಶಿಕ್ಷಕರುಗಲು ಬೋಧಿಸುವ 4 ಶಾಲೆಗಳಲ್ಲಿ ವಿಶಿಷ್ಟ ಬೋಧನೆ. ಒಂದು ದಿನ ಈ ನಾಲ್ಕು ಮಂದಿ ಶಿಕ್ಷಕರುಗಳು ಒಂದೇ ಶಾಲೆಗೆ[ ಆ ಶಿಕ್ಷಕರುಗಳ ಬೋಧಿಸುವ ಶಾಲೆಗಳು ಮಾತ್ರ ] ತೆರಳುವುದು. 4 ಮಂದಿಯೂ ತರಗತಿಯಲ್ಲಿ ಉಪಸ್ಥಿತರಿರುವುದು. ಆ ದಿನ ತರಬೇತಿ ಇರುವ ಶಾಲೆಯ ಶಿಕ್ಷಕರನ್ನು ಹೊರತು ಪಡಿಸಿ ಉಳಿದ ಮೂವರು ಆ ದಿನ ಗಣಿತದ 15 ಪಾಠಗಳನ್ನು ತಲಾ 5 ಪಾಠಗಳಂತೆ ಹಂಚಿಕೊಂಡು ತರಬೇತಿ ನೀಡುವುದು. ಇಂದು ಅದರ ಮೊದಲ ಪ್ರಯೋಗ ನಡೆದದ್ದು ಸರಕಾರಿ ಪ್ರೌಢಶಾಲೆ ನಡದಲ್ಲಿ. ಸದಾಶಿವ ಸರ್, ಶರತ್ ಸರ್ ಹಾಗೂ ವೀಣಾ ಮೇಡಂ ಇವರುಗಳು ಕ್ಲಿಷ್ಟವಾಗಿದ್ದ ಗಣಿತವನ್ನು ಸರಳವಾಗಿ ಬೋಧಿಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬುವಲ್ಲಿ ಯಶಸ್ವಿಯಾದರು. ಬೆಳಿಗ್ಗೆ 8.30 ರಿಂದ ಸಂಜೆ 5.40 ರ ತನಕ ನಿರಂತರ ಮೂರು ಮಂದಿಯೂ ಬಿಡುವಿಲ್ಲದೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡರು. ವಿದ್ಯಾರ್ಥಿಗಳು ಕೊನೆಯ ತನಕವೂ ಉಲ್ಲಾಸದಿಂದ ಭಾಗವಹಿಸಿದ್ದು, ತರಬೇತಿಯ ಬಗ್ಗೆ ಖುಷಿಗೊಂಡಿದ್ದರು. ಈ ಪ್ರಯೋಗವು ಫಲಿತಾಂಶದ ಮೇಲೆ ಧನಾತ್ಮಕ ಪ್ರಭಾವ ಬೀರುವುದರಲ್ಲಿ ಸಂಶಯವಿಲ್ಲ. ನಮ್ಮ ಶಾಲೆಯಲ್ಲಿ ಯಾವುದೇ ಪ್ರತಿಫಲಗಳ ನಿರೀಕ್ಷೆ ಇಲ್ಲದೆ, ವಿದ್ಯಾರ್ಥಿಗಳ ಫಲಿತಾಂಶದ ದೃಷ್ಟಿಯಿಂದ ಪೂರ್ತಿ ದಿನ ತರಬೇತಿ ನೀಡಿದ ಮೂವರಿಗೂ ಹೃದಯಪೂರ್ವಕ ಧನ್ಯವಾದಗಳು. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ನಮ್ಮ ಮುಖ್ಯ ಶಿಕ್ಷಕಿ ಶ್ರೀಮತಿ ಶರ್ಮಿಳಾ ಮೇಡಂ ಹಾಗೂ ಎಲ್ಲಾ ಶಿಕ್ಷಕರಿಗೂ ನನ್ನ ಧನ್ಯವಾದಗಳು. ಮುಂದಿನ ತರಬೇತಿ ವೀಣಾ ಮೇಡಂ ರವರ ಸ.ಪ್ರೌ.ಶಾಲೆ ಹಳೇಪೇಟೆ ಉಜಿರೆಯಲ್ಲಿ ನಡೆಯಲಿದೆ.









4 comments:

  1. Yes. It's a new Idea. Hope for the best

    ReplyDelete
  2. check here for latest updates on jac results 2018
    www.jac.nic.in

    ReplyDelete
  3. Nowadays streaming videos and latest TV shows in different applications is similar as compared to one and other.
    playview for pc

    ReplyDelete
  4. it is very nice in the students

    ReplyDelete