Inspiring words
Thursday, 27 December 2018
Sunday, 16 December 2018
Saturday, 8 December 2018
Thursday, 6 December 2018
Wednesday, 5 December 2018
Tuesday, 4 December 2018
Monday, 3 December 2018
Sunday, 2 December 2018
Friday, 30 November 2018
Thursday, 29 November 2018
Tuesday, 27 November 2018
Wednesday, 21 November 2018
Saturday, 15 September 2018
Friday, 16 March 2018
Saturday, 3 March 2018
TIPS for SSLC Students from ANSSIRD Mysore - Teleconfrence
ಉಪಗ್ರಹ ಆಧಾರಿತ ಶಿಕ್ಷಣ - ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರಾಜ್ಯದ ಎಲ್ಲಾ ತಾಲೂಕುಗಳ ತಾಲೂಕು ಪಂಚಾಯತ್ ನಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಇದರ 2017-18ನೇ ಸಾಲಿನ ಕೊನೆಯ ಪ್ರಸಾರ ದಿನಾಂಕ 03/03/2018ರಂದು ನಡೆಸಲಾಯಿತು. ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆ ಮೈಸೂರುನಿಂದ ಪ್ರಸಾರಗೊಂಡ ಈ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು ಇವರು ಆಯೋಜಿಸಿದ್ದರು. ಮಾನ್ಯ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಶಿವರಾಮಯ್ಯ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮಗಳ ನಿರ್ವಹಣೆಯನ್ನು ದ.ಕ.ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀ ಶಮಂತ್ ಇವರು ನಡೆಸಿದರು. ಮನೋವಿಜ್ಞಾನದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿಶ್ವನಾಥ ಸರ್ ಹಾಗೂ ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ, ವಿಜ್ಞಾನ ಶಿಕ್ಷಕರು ಬದ್ರಿಯಾ ಸ್ಕೂಲ್ ಮಂಗಳೂರು ಭಾಗವಹಿಸಿದ್ದರು.
Wednesday, 28 February 2018
SSLC Students get ready to face Examination at Thokkottu Ullala
ದಿನಾಂಕ 27/02/2018 ರಂದು ಉಳ್ಳಾಲ ಸಮೀಪ ತೊಕ್ಕೊಟ್ಟು ಯುನಿಟಿ ಹಾಲ್ ನಲ್ಲಿ ಎಸ್.ಎಸ್.ಎಲ್.ವಿದ್ಯಾರ್ಥಿಗಳಿಗೆ ಒಂದು ದಿನದ ಗಣಿತ ತರಬೇತಿ ಕಾರ್ಯಗಾರ ನಡೆಸಲಾಯಿತು. ಸುಮಾರು 1000 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್ ರವಿ ಹಾಗೂ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ವೈ ಶಿವರಾಮಯ್ಯ ಭಾಗವಹಿಸಿದ್ದರು. ಶ್ರೀ ಶಾಹುಲ್ ಹಮೀದ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ದ.ಕ.ಜಿಲ್ಲಾ ಪಮಚಾಯತ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಅಧ್ಯಕ್ಷರಾದ ಜ|ಅನ್ವರ್ ಹುಸೈನ್ ವಹಿಸಿದ್ದರು. ಕಾರ್ಯಕ್ರಮವನ್ನು ಸೆಂಟ್ರಲ್ ಕಮಿಟಿ ಉಳ್ಳಾಲ ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದರು.
Monday, 19 February 2018
744 hours reamaining to SSLC Examination....
ಇಂದು(19/2/2017) ಡಾ| ಅಂಬೇಡ್ಕರ್ ಭವನ ಕುಕ್ಕೇಡಿ, ಬೆಳ್ತಂಗಡಿ ತಾಲೂಕು ಇಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಜ್ಞಾನ ವಿಷಯಕ್ಕೆ ಯೋಗೀಶ್, ಸ.ಪ್ರೌ.ಶಾಲೆ ಗುರುವಾಯನ ಕೆರೆ ಹಾಗೂ ಇಂಗ್ಲೀಷ್ ವಿಷಯಕ್ಕೆ ಶ್ರೀ ಜಗನ್ನಾಥ್ ಮುಖ್ಯ ಶಿಕ್ಷಕರು, ಸ.ಪ್ರೌ.ಶಾಲೆ ಗುರುವಾಯನ ಕೆರೆ ಭಾಗವಹಿಸಿದ್ದರು. ಶ್ರೀ ರಿಯಾಝ್ ಕೊಕ್ರಾಡಿ ಕಾರ್ಯಕ್ರಮವನ್ನು ನಿರೂಪಿಸಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶೇಖರ ಕುಕ್ಕೇಡಿ ವಹಿಸಿದ್ದರು. ಸಮಾರಂಭವನ್ನು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯಾಜ್ಯೋತಿ ವಹಿಸಿದ್ದರು.
Sunday, 18 February 2018
Telecast from ANSSIRD Mysore for SSLC Students
ಆಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ ಮೈಸೂರು(ANSSIRD) ಇಲ್ಲಿಂದ ಪ್ರಸಾರಗೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾನ್ಯ ಶ್ರೀ ರವಿ ಸರ್ ನೆರವೇರಿಸಿ ವಿದ್ಯಾರ್ಥಿಗಳಿಗೆ ಅನೇಕ ಮಾಹಿತಿಗಳನ್ನು ನೀಡಿದರು.. ಮಾನ್ಯ ದ.ಕ.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಶಿವರಾಮಯ್ಯ ಇವರು ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊಫೆಸರ್ ಶ್ರೀ ವಿಶ್ವನಾಥ ಇವರು ಮಾನಸಿಕವಾಗಿ ಪರೀಕ್ಷೆ ಎದುರಿಸುವ ಕುರಿತು ಮಾತನಾಡಿದರು. ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಎಸ್. ಶಾಸ್ತ್ರಿ, ವಿಜ್ಞಾನ ಶಿಕ್ಷಕರು ಬದ್ರಿಯಾ ಪದವಿಪೂರ್ವ ಕಾಲೇಜು ಮಂಗಳೂರು ಇವರು ಉತ್ತಮ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಕನ್ನಡ ವಿಷಯ ಪರಿವೀಕ್ಷಕರಾದ ಶ್ರೀ ಶಮಂತ್ ಸರ್ ರವರು ಅದ್ಭುತವಾಗಿ ನಡೆಸಿಕೊಟ್ಟರು. ಈ ಹಂತದಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದರು. ಮುಂದಿನ ಪ್ರಸಾರ ದಿನಾಂಕ 3/3/2018ರಂದು ನಡೆಯಲಿದೆ.ಎರಡನೇ ಚಿತ್ರವು ಗೋಕಾಕ್ ನಲ್ಲಿ ವಿದ್ಯಾರ್ಥಿಗಳು TV ವೀಕ್ಷಣೆ ಮಾಡುವ ಸಂದರ್ಭ.
Thursday, 8 February 2018
Hassan Diet with Principal Experienced a lot in Maths World
ಇಂದು ಮಾನ್ಯ ಉಪನಿರ್ದೇಶಕರು[ ಅಭಿವೃದ್ಧಿ] ಶ್ರೀ ನಾಗೇಶ್ ಸರ್ ಹಾಗೂ ಉಪನ್ಯಾಸಕರುಗಳ ತಂಡ ಹಾಸನ ಡಯಟ್ - ಇಂದು ಸರಕಾರಿ ಪ್ರೌಢಶಾಲೆ ನಡ ಇಲ್ಲಿನ ಗಣಿತ ಲೋಕ ಕ್ಕೆ ಭೇಟಿ ನೀಡಿದರು. ಮಾನ್ಯ ಉಪನಿರ್ದೇಶಕರು ಗಣಿತ ಲೋಕದ ಚಟುವಟಿಕೆಗಳ ಬಗ್ಗೆ ಅಪಾರ ಸಂತಸ ವ್ಯಕ್ತ ಪಡಿಸಿದರು. ಹಾಸನ ಡಯಟ್ ನಲ್ಲಿ ಗಣಿತ ಪ್ರಯೋಗಶಾಲೆ ರಚನೆ ಮಾಡುವ ಉದ್ದೇಶದಿಂದ ಈ ಭೇಟಿ ಮಾಡಲಾಗಿತ್ತು. ನಡ ಶಾಲೆಯ ಗಣಿತ ಲೋಕ ರಾಜ್ಯದ ಅನೇಕ ಶಾಲೆಗಳು, ಡಯಟ್ ಗಳಿಗೆ ಹಾಗೂ CTE ಗಳಲ್ಲಿ ಗಣಿತ ಪ್ರಯೋಗಶಾಲೆ ತೆರೆಯುವಂತೆ ಪ್ರೇರಣೆ ನೀಡುತ್ತಿರುವುದು ಸಂತಸ ಉಂಟುಮಾಡಿದೆ. ಮುಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಗಣಿತ ಪ್ರಯೋಗಶಾಲೆ ಅವಿಭಾಜ್ಯ ಅಂಗವಾಗಲಿದೆ
Tuesday, 6 February 2018
NGO Team of Karkala and Belthangady Curious to watch Maths Lab
ಇಂದು ಕಾರ್ಕಳ ಹಾಗೂ ಬೆಳ್ತಂಗಡಿ ತಾಲೂಕುಗಳ ಶಿಕ್ಷಣ ಸಂಪನ್ಮೂಲ ಕೇಂದ್ರಗಳ[NGO] ಸದಸ್ಯರು ಮತ್ತು ಪದಾಧಿಕಾರಿಗಳು ಸರಕಾರಿ ಪ್ರೌಢಶಾಲೆ ನಡ ಇದರ ಗಣಿತ ಪ್ರಯೋಗಶಾಲೆಗೆ ಅಧ್ಯಯನ ಭೇಟಿ ನೀಡಿದರು. ಭೇಟಿಯಲ್ಲಿ ಬಹಳಷ್ಟು ಖುಷಿ ಪಟ್ಟ ಸದಸ್ಯರುಗಳು ತಮ್ಮ ಸಂತೋಷವನ್ನು ಮಾತುಗಳಲ್ಲಿ ವ್ಯಕ್ತಪಡಿಸಿದರು. ಪ್ರಯೋಗಶಾಲೆಯ ವಿಸ್ತರಣೆ ಕಾರ್ಯ ನಡೆಯುತ್ತಿರುವುದರಿಂದ ಸ್ವಲ್ಪಮಟ್ಟಿನ ಅಡಚಣೆ ಉಂಟಾಯಿತು. ಮುಂದೆ ವೀಕ್ಷಕರಿಗೆ ವಿಸ್ತರಣೆ ಕಾರ್ಯ ಪೂರ್ಣಗೊಂಡ ನಂತರ ಅವಕಾಶ ಕಲ್ಪಿಸಲಾಗುವುದು.
Thursday, 1 February 2018
Innovative Teaching for SSLC Students Ended at Venur
"ಗಣಿತ ಬೋಧನೆಯಲ್ಲಿ ವಿನೂತನ ಪ್ರಯೋಗ" ಇಂದು ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು ಇಲ್ಲಿ ಮುಕ್ತಾಯಗೊಂಡಿತು. ಶ್ರೀ ಧ.ಮ.ಅನುದಾನಿತ ಪ್ರೌಢಶಾಲೆಯ ಗಣಿತ ಅಧ್ಯಾಪಕರೂ ಹಾಗೂ ರಾಜ್ಯ ಗಣಿತ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಶ್ರೀ ಸದಾಶಿವ ಪೂಜಾರಿಯವರ ಯೋಜನೆ ಇದಾಗಿದ್ದು, ಇಂದಿಗೆ ನಾಲ್ಕು ಹಂತದ ಕೊನೆಯ ಪ್ರಯೋಗವು ನಡಯಿತು.ಶ್ರೀ ಸದಾಶಿವ ಪೂಜಾರಿ, ಶ್ರೀಮತಿ ವೀಣಾ ಶಾನ್ ಭಾಗ್, ಸರಕಾರಿ ಪ್ರೌಢಶಾಲೆ ಉಜಿರೆ, ಶ್ರೀ ಯಾಕೂಬ್ ಕೊಯ್ಯೂರು ಸರಕಾರಿ ಪ್ರೌಢಶಾಲೆ ನಡ ಇವರುಗಳು 10ನೇ ತರಗತಿಯ 15 ಅಧ್ಯಾಯಗಳನ್ನು ತಲಾ 5 ರಂತೆ ಹಂಚಿಕೊಂಡು ಬೆಳಿಗ್ಗೆ 9ಗಂಟೆಯಿಂದ ಸಂಜೆ 5 ಗಂಟೆ ತನಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಬೋಧನೆಯನ್ನು ಮಾಡಿದರು. ಶ್ರೀ ಶರತ್ ಕುಮಾರ್ ಗಣಿತ ಶಿಕ್ಷಕರು, ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು ಇವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಂಘಟಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಮುಖ್ಯೋಪಾಧ್ಯಾರಾದ ಶ್ರೀ ತುಳಪುಳೆ ವಹಿಸಿ, ಶುಭ ಕೋರಿದರು. ವಿದ್ಯಾರ್ಥಿಗಳ ಪ್ರತಿಕ್ರಿಯೆ ಅತ್ಯತ್ತಮವಾಗಿತ್ತು.
ಎಲ್ಲಾ ಶಿಕ್ಷಕರು ಅತ್ಯತ್ತಮ ಸಹಕಾರ ನೀಡಿದರು. ನಮ್ಮ ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ವೇಣೂರು ಶಾಲೆಯ ಪರಿಸರ ಹಾಗೂ ವ್ಯವಸ್ಥೆ ನಿಜಕ್ಕೂ ಪ್ರಶಂಸನೀಯವಾಗಿತ್ತು.
https://drive.google.com/open?id=1RhvisKOqAN4mCxkI3WopgguDpt4oP2BI
ಎಲ್ಲಾ ಶಿಕ್ಷಕರು ಅತ್ಯತ್ತಮ ಸಹಕಾರ ನೀಡಿದರು. ನಮ್ಮ ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ವೇಣೂರು ಶಾಲೆಯ ಪರಿಸರ ಹಾಗೂ ವ್ಯವಸ್ಥೆ ನಿಜಕ್ಕೂ ಪ್ರಶಂಸನೀಯವಾಗಿತ್ತು.
https://drive.google.com/open?id=1RhvisKOqAN4mCxkI3WopgguDpt4oP2BI
Subscribe to:
Posts (Atom)