"ಗಣಿತ ಬೋಧನೆಯಲ್ಲಿ ವಿನೂತನ ಪ್ರಯೋಗ" ಇಂದು ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು ಇಲ್ಲಿ ಮುಕ್ತಾಯಗೊಂಡಿತು. ಶ್ರೀ ಧ.ಮ.ಅನುದಾನಿತ ಪ್ರೌಢಶಾಲೆಯ ಗಣಿತ ಅಧ್ಯಾಪಕರೂ ಹಾಗೂ ರಾಜ್ಯ ಗಣಿತ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಶ್ರೀ ಸದಾಶಿವ ಪೂಜಾರಿಯವರ ಯೋಜನೆ ಇದಾಗಿದ್ದು, ಇಂದಿಗೆ ನಾಲ್ಕು ಹಂತದ ಕೊನೆಯ ಪ್ರಯೋಗವು ನಡಯಿತು.ಶ್ರೀ ಸದಾಶಿವ ಪೂಜಾರಿ, ಶ್ರೀಮತಿ ವೀಣಾ ಶಾನ್ ಭಾಗ್, ಸರಕಾರಿ ಪ್ರೌಢಶಾಲೆ ಉಜಿರೆ, ಶ್ರೀ ಯಾಕೂಬ್ ಕೊಯ್ಯೂರು ಸರಕಾರಿ ಪ್ರೌಢಶಾಲೆ ನಡ ಇವರುಗಳು 10ನೇ ತರಗತಿಯ 15 ಅಧ್ಯಾಯಗಳನ್ನು ತಲಾ 5 ರಂತೆ ಹಂಚಿಕೊಂಡು ಬೆಳಿಗ್ಗೆ 9ಗಂಟೆಯಿಂದ ಸಂಜೆ 5 ಗಂಟೆ ತನಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಬೋಧನೆಯನ್ನು ಮಾಡಿದರು. ಶ್ರೀ ಶರತ್ ಕುಮಾರ್ ಗಣಿತ ಶಿಕ್ಷಕರು, ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು ಇವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಂಘಟಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಮುಖ್ಯೋಪಾಧ್ಯಾರಾದ ಶ್ರೀ ತುಳಪುಳೆ ವಹಿಸಿ, ಶುಭ ಕೋರಿದರು. ವಿದ್ಯಾರ್ಥಿಗಳ ಪ್ರತಿಕ್ರಿಯೆ ಅತ್ಯತ್ತಮವಾಗಿತ್ತು.
ಎಲ್ಲಾ ಶಿಕ್ಷಕರು ಅತ್ಯತ್ತಮ ಸಹಕಾರ ನೀಡಿದರು. ನಮ್ಮ ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ವೇಣೂರು ಶಾಲೆಯ ಪರಿಸರ ಹಾಗೂ ವ್ಯವಸ್ಥೆ ನಿಜಕ್ಕೂ ಪ್ರಶಂಸನೀಯವಾಗಿತ್ತು.
https://drive.google.com/open?id=1RhvisKOqAN4mCxkI3WopgguDpt4oP2BI

0 comments:
Post a Comment