New

ಎಸ್.ಎಸ್.ಎಲ್.ಸಿ. ಗಣಿತ ವಿಷಯ ಎಸ್.ಎಸ್.ಎಲ್.ಸಿ 2021 ಮಾದರಿ ಪ್ರಶ್ನೆ ಪತ್ರಿಕೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಬಿಡುಗಡೆಯಾಗಿದ್ದು ಇಲ್ಲಿ ಲಭ್ಯವಿದೆ...ಖ್ಯಾತ ಮನಶಾಸ್ತ್ರಜ್ಞರಾದ ಥಾನ೯ಡೈಕ್ ರವರ ಅದ್ಭುತ ಸಾಲುಗಳು ನೀವು ಓಡುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಡೆಯುತ್ತಾರೆ.ನೀವು ನಡೆಯುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಿಲ್ಲುತ್ತಾರೆ.ನೀವು ನಿಂತಿದ್ದರೆ,ನಿಮ್ಮ ಮಕ್ಕಳು ಮಲಗುತ್ತಾರೆ.ನೀವು ಮಲಗಿದ್ದರೆ,ನಿಮ್ಮ ಮಕ್ಕಳು ನಿದ್ರಿಸುತ್ತಾರೆ.ನೀವು ನಿಮ್ಮ ತರಗತಿಯಲ್ಲಿ ನಿದ್ರಿಸುತ್ತಿದ್ದರೆ,ನಿಮ್ಮ ಮಕ್ಕಳು ಸಾಯುತ್ತಾರೆ.ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ಮಕ್ಕಳಲ್ಲಿ ಚೈತನ್ಯದ ಚಿಲುಮೆಯ ಮೂಲವಾಗೋಣ..." ಮಕ್ಕಳು- ನಮ್ಮ ಕನಸುಗಳು "

Thursday 11 January 2018

2nd phase of Innovative teaching

ವಿನೂತನ ವಿಧಾನದ ಬೋಧನೆಯ ಎರಡನೇ ಹಂತದ ಯಶಸ್ವಿ ಮುಕ್ತಾಯ. ಇಂದು ಸರಕಾರಿ ಪ್ರೌಢಶಾಲೆ ಹೆಳೇಪೇಟೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಗಣಿತ ತರಬೇತಿಯನ್ನು 4 ಮಂದಿ ಗಣಿತ ಶಿಕ್ಷಕರ ತಂಡದಿಂದ ನಡೆಸಲಾಯಿತು. ಶ್ರೀ.ಧ.ಅನುದಾನಿತ ಪ್ರೌಢಶಾಲೆ ಉಜಿರೆಯ ಶ್ರೀ ಸದಾಶಿವ ಪೂಜಾರಿ, ಶ್ರೀ ಶರತ್ ಕುಮಾರ್ ತುಳಪುಳೆ,ಸರಕಾರಿ ಪದವಿಪೂರ್ವ ಕಾಲೇಜು ವೇಣೂರು, ಶ್ರೀ ಯಾಕೂಬ್ ಕೊಯ್ಯೂರು,ಸರಕಾರಿ ಪ್ರೌಢಶಾಲೆ ನಡ, ಶ್ರೀಮತಿ ವೀಣಾ ಮೇಡಂ,ಸರಕಾರಿ ಪ್ರೌಢಶಾಲೆ ಹಳೇಪೇಟೆ ಉಜಿರೆ, ಇವರ ತಂಡವು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಗಣಿತದಲ್ಲಿ ಉತ್ತೀರ್ಣಗೊಳ್ಳಲು ಅಗತ್ಯವಾದ ಮಾಹಿತಿಗಳನ್ನು ನೀಡಿದರು. 15 ಅಧ್ಯಾಯಗಳನ್ನು ತಲಾ 5ರಂತೆ ಸದ್ರಿ ಶಾಲೆಯ ವೀಣಾ ಮೇಡಂ ರನ್ನು ಹೊರತು ಪಡಿಸಿ ಉಳಿದ 3 ಮಂದಿ ಹಂಚಿಕೊಂಡು ತರಬೇತಿ ನೀಡಲಾಯಿತು. ಗಣಿತದ ಕ್ಲಿಷ್ಟತೆಯನ್ನು ಅತ್ಯಂತ ಸರಳ ರೀತಿಯಲ್ಲಿ ಬೋಧಿಸಿ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದರು.ವಿದ್ಯಾ ರ್ಥಿಗಳು ಬಹಳಷ್ಟು ಆಸಕ್ತಿಯಿಂದ ಈ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದು ವಿಶೇಷವಾಗಿತ್ತು. ಇಡೀ ದಿನ ಗಣಿತ ಬೋಧಿಸಿದ್ದೇವೆ ಎಂಬ ಬೇಸರ ಸ್ವಲ್ಪವೂ ವಿದ್ಯಾರ್ಥಿಗಳಲ್ಲಿ ಕಾಣಿಸಲಿಲ್ಲ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ್ದು ಗಣಿತ ಫಲಿತಾಂಶದಲ್ಲಿ ಹೆಚ್ಚಳಕ್ಕೆ ಖಂಡಿತಾ ನೆರವಾಗಲಿದೆ.ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಮುಖ್ಯ ಶಿಕ್ಷಕಿ ಶ್ರೀಮತಿ ತಾರಕೇಸರಿ ಮೇಡಂ ಇವರಿಗೆ ನಮ್ಮ ತಂಡದ ಹೃದಯಪೂರ್ವಕ ಧನ್ಯವಾದಗಳು. ಇಡೀ ದಿನದ ಕಾರ್ಯಕ್ರಮವನ್ನು ಶ್ರೀಮತಿ ವೀಣಾ ಮೇಡಂ ಆಯೋಜಿಸದ್ದರು. ಕಾರ್ಯಕ್ರಮವು ಬೆಳಿಗ್ಗೆ 9.00ರಿಂದ ಸಂಜೆ 5.30ರ ತನಕ ಬಿಡುವಿಲ್ಲದೆ ನಡೆಯಿತು.












0 comments:

Post a Comment