New

ಎಸ್.ಎಸ್.ಎಲ್.ಸಿ. ಗಣಿತ ವಿಷಯ ಎಸ್.ಎಸ್.ಎಲ್.ಸಿ 2021 ಮಾದರಿ ಪ್ರಶ್ನೆ ಪತ್ರಿಕೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಬಿಡುಗಡೆಯಾಗಿದ್ದು ಇಲ್ಲಿ ಲಭ್ಯವಿದೆ...ಖ್ಯಾತ ಮನಶಾಸ್ತ್ರಜ್ಞರಾದ ಥಾನ೯ಡೈಕ್ ರವರ ಅದ್ಭುತ ಸಾಲುಗಳು ನೀವು ಓಡುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಡೆಯುತ್ತಾರೆ.ನೀವು ನಡೆಯುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಿಲ್ಲುತ್ತಾರೆ.ನೀವು ನಿಂತಿದ್ದರೆ,ನಿಮ್ಮ ಮಕ್ಕಳು ಮಲಗುತ್ತಾರೆ.ನೀವು ಮಲಗಿದ್ದರೆ,ನಿಮ್ಮ ಮಕ್ಕಳು ನಿದ್ರಿಸುತ್ತಾರೆ.ನೀವು ನಿಮ್ಮ ತರಗತಿಯಲ್ಲಿ ನಿದ್ರಿಸುತ್ತಿದ್ದರೆ,ನಿಮ್ಮ ಮಕ್ಕಳು ಸಾಯುತ್ತಾರೆ.ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ಮಕ್ಕಳಲ್ಲಿ ಚೈತನ್ಯದ ಚಿಲುಮೆಯ ಮೂಲವಾಗೋಣ..." ಮಕ್ಕಳು- ನಮ್ಮ ಕನಸುಗಳು "

Tuesday 16 January 2018

An Exited hour at Gujarathi School Mangalore

ಇಂದು [16/01/2018] ರಂದು ಗುಜರಾತಿ ಪ್ರೌಢಶಾಲೆ ಮಂಗಳೂರು ಇಲ್ಲಿ ಮಂಗಳೂರು ಉತ್ತರ ವಲಯದ ಗಣಿತ ಶಿಕ್ಷಕರಿಗೆ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಮಂಗಳೂರು ಉತ್ತರ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಮತಿ ಮಂಜುಳಾ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಗಾರದ ಉದ್ಘಾಟನೆಯನ್ನು ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಸಂಸ್ಥೆಯ ರಾಜನ್ ಬಲದೇವು ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರು ಉತ್ತರ ವಲಯದ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜಾನೆಟ್ ಲೋಬೋ ಹಾಗೂ ಉಸ್ಮಾನ್ ಇವರುಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತು. ಇನ್ನಿಬ್ಬರು ಸಂಪನ್ಊಲ ವ್ಯಕ್ತಿಗಳಾಗಿ ಶ್ರೀ ಗೋಪಾಲಕೃಷ್ಣ ಭಟ್ ಉಪ ಪ್ರಾಂಶುಪಾಲರು ಸೈಂಟ್ ಅಲೋಷಿಯಸ್ ಮಂಗಳೂರು ಹಾಗೂ ಶ್ರೀ ಪುರುಷೋತ್ತಮ್ ,ಅನುದಾನಿತ ಪ್ರೌಢಶಾಲೆ ಬೆಳುವಾಯಿ ಇವರುಗಳು ಭಾಗವಹಿಸಿದ್ದು. ತರಬೇತಿ ಕಾರ್ಯಗಾರಕ್ಕೆ ಭೇಟಿ ನೀಡಿದ ದ.ಕ.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು, ಸುಮಾರು 1ಗಂಟೆ ಅವಧಿ ತರಬೇತಿಯಲ್ಲಿ ಭಾಗವಹಿಸಿ, ನಂತರ ಕಾರ್ಯಾಗಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.








0 comments:

Post a Comment