The 5 days traing for Maths Teachers of Belthangady and Moodbidre zone ended today. The trainees expressed their openion and appriciated the programme. ಇಂದು ಸಂತ ತೆರೇಸಾ ಪ್ರೌಢಶಾಲೆ ಬೆಳ್ತಂಗಡಿಯಲ್ಲಿ ನಡೆಯುತ್ತಿದ್ದ 5 ದಿನಗಳ ಗಣಿತ ಶಿಕ್ಷಕರ ತರಬೇತಿಯು ಮುಕ್ತಾಯಗೊಂಡಿತು. ತರಬೇತಿಯು ಯಶಸ್ವಿಯಾಗಿ ನಡೆದಿರುವ ಬಗ್ಗೆ ಶಿಬಿರಾರ್ಥಿಗಳು ಸಂತೋಷ ವ್ಯಕ್ತಪಡಿಸಿದರು. ತರಬೇತಿಯಲ್ಲಿ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿದ್ದವು. ಶಿಬಿರಾರ್ಥಿಗಳು ತಮ್ಮ ಅನಿಸಿಕೆಯಲ್ಲಿ ತರಬೇತಿಯು ತುಂಬಾ ಉಪಯುಕ್ತವಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಈ ತರಬೇತಿಯನ್ನು ಸದಾಶಿವ ಪೂಜಾರಿ, ಶರತ್ ಕುಮಾರ್, ಯಾಕೂಬ್ ಕೊಯ್ಯೂರು, ವೀಣಾ ಶಾನಭಾಗ್ ಹಾಗೂ ಪುರುಷೋತ್ತಮ ಸರ್ ಇವರುಗಳು ವೈವಿಧ್ಯಮಯ ರೀತಿಯಲ್ಲಿ ಆಯೋಜಿಸಿದ್ದರು.
ನಾನು ಗಣಿತಕ್ಕೆ ಸಂಬಂಧಿಸಿದ ಅನೇಕ ಸಾಮಾಗ್ರಿಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮೊಂದಿಗೆ ಹಂಚಿಕೊಂಡಿರುತ್ತೇನೆ. ಆದರೂ ಅನೇಕ ಮಂದಿ ನನಗೆ ವೈಯಕ್ತಿಕವಾಗಿ ಸಂಪರ್ಕಿಸಿ ಸಾಮಗ್ರಿಗಳಿಗಾಗಿ ಬೇಡಿಕೆ ಸಲ್ಲಿಸುತ್ತಿರುತ್ತಾರೆ. ಇದು ನನಗೆ ತುಂಬಾ ಕಷ್ಟಕರವಾಗುತ್ತಿತ್ತು. ನಾನು ತಯಾರಿಸಿದ ಎಲ್ಲಾ ಸಾಮಾಗ್ರಿಗಳು ಒಂದೇ ಕಡೆ ದೊರೆಯುವಂತಾಗಲಿ ಎಂಬ ಉದ್ದೇಶದಿಂದ ಈ ಬ್ಲಾಗ್ ರಚಿಸಿರುತ್ತೇನೆ. ಇದರಲ್ಲಿ ಅನೇಕ ಮಾಹಿತಿ ಲಭ್ಯವಿದ್ದು, ಉಚಿತವಾಗಿ ಡೌನ್ ಲೋಡ್ ಮಾಡಬಹುದಾಗಿದೆ..
The Speech by Honourable Thanveer Aziz Sait the Education minister at Maths Lab GHS Nada on 10/10/2017
0 comments:
Post a Comment