ಇಂದು ಸೈಂಟ್ ಮೇರೀಸ್ ಪ್ರೌಢಶಾಲೆ ಲಾಯಿಲ ಬೆಳ‍್ತಂಗಡಿ ಇಲ್ಲಿ ಒಂದು ದಿನದ ಗಣಿತ ಶಿಕ್ಷಕರ ಸಮಾಲೋಚನಾ ಸಭೆಯನ್ನು ನಡೆಸಲಾಯಿತು. ಈ ಸಭೆಯ ಉದ್ಘಾಟನೆಯನ್ನು ಸೈಂಟ್ ಮೇರೀಸ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜಿನ್ಸಿ ಯವರು ನಡೆಸಿಕೊಟ್ಟರು. ಈ ಸಭೆಯಲ್ಲಿ ಸರಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳ 50 ಮಂದಿ ಶಿಕ್ಷಕ/ಕಿಯರು ಭಾಗವಹಿಸಿದ್ದರು. ಸಭೆಯಲ್ಲಿ ಮುಖ್ಯವಾಗಿ ಎಸ್.ಎಸ್.ಎಲ್.ಸಿ.ಫಲಿತಾಂಶ ಸುಧಾರಣೆಯ ಬಗ್ಗೆ ಚರ್ಚಿಸಲಾಯಿತು. ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳು, ಸಾಧಾರಣ ವಿದ್ಯಾರ್ಥಿಗಳು ಹಾಗೂ ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಯೋಜನೆಗಳನ್ನು ತಯಾರಿಸಿ ಅವರನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಿದ್ಧಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಶ್ರೀ ಸದಾಶಿವ ಪೂಜಾರಿ, ಎಸ್.ಡಿ.ಎಂ.ಅನುದಾನಿತ ಪ್ರೌಢಶಾಲೆ ಉಜಿರೆ, ಶ್ರೀ ಯಾಕೂಬ್ ಕೊಯ್ಯೂರು, ಶ್ರೀಮತಿ ವೀಣಾ ಶಾನಭಾಗ್ ,ಶ್ರೀ ಶರತ್ ಕುಮಾರ್ ಇವರುಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಶ್ರೀ ಯಾಕೂಬ್ ಕೊಯ್ಯೂರು ಸ್ವಾಗತಿಸಿ, ಕೊನೆಯಲ್ಲಿ ಶ್ರೀ ಆದಂ ಸರ್ ,ಸರಕಾರಿ ಪ್ರೌಢಶಾಲೆ ಪುತ್ತಿಲ ಧನ್ಯವಾವಿತ್ತರು. ಶ್ರೀಮತಿ ವೀಣಾ ಶಾನುಭಾಗ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment